ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಇಲಾಖೆಯ ಸಂಕ್ಷಿಪ್ತ ಪರಿಚಯ:  

         ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಾರಂಭದ ಮೂಲವು ಹಿಂದಿನ ಮೈಸೂರು ಸಂಸ್ಥಾನದ ಕಾಲದಿಂದಲೂ ಲಭ್ಯವಿದೆ. 1950ರಲ್ಲಿ ಸಂಯುಕ್ತ ಆರ್ಥಿಕ ಏಕೀಕರಣದಿಂದಾಗಿ ಮೈಸೂರು ಮಹಾರಾಜರ ಸಂಸ್ಥಾನದ ಕಂಪ್ಟ್ರೋಲರ್ ಕಛೇರಿಯನ್ನು ರದ್ದುಗೊಳಿಸಿ ಅದರ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ವಿಭಜಿಸಿ ಮೈಸೂರಿನ ಮಹಾಲೇಖಪಾಲರ ಕಛೇರಿಗೂ ಮತ್ತು ಹೊಸದಾಗಿ ಸೃಜಿಸಿದ ಸ್ಥಳೀಯ ನಿಧಿಯ ಲೆಕ್ಕಪರೀಕ್ಷಕರ ಕಛೇರಿಗೂ ಹಂಚಲಾಯಿತು.

         ಈ ರೀತಿ ಹೊಸದಾಗಿ ಸೃಜಿಸಲಾದ ಕಛೇರಿಯ ಕಾರ್ಯ ವ್ಯಾಪ್ತಿಯನ್ನು ಕೇವಲ ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಗೆ ಮಾತ್ರ ಸೀಮಿತಗೊಳಿಸಲಾಗಿತ್ತು. 1952ರಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಲೆಕ್ಕಪತ್ರ ಸಿಬ್ಬಂದಿಗಳನ್ನು ಒಂದೇ ಇಲಾಖೆಯ ಅಧೀನಕ್ಕೆ ಒಳಪಡಿಸಲು ನಿರ್ಧರಿಸಲಾಯಿತು. ಅಲ್ಲದೆ ಇಲಾಖೆಯ ಪದನಾಮವನ್ನು ಸ್ಥಳೀಯ ನಿಧಿ ಲೆಕ್ಕಪರಿಶೋಧಕರು (Examiner, Local Fund Audit) ಎಂಬುದನ್ನು ಬದಲಾಯಿಸಿ ನಿಯಂತ್ರಕರು, ರಾಜ್ಯ ಲೆಕ್ಕಪತ್ರ ಇಲಾಖೆ (Controller, State Accounts Department) ಎಂದು ಮರುನಾಮಕರಣ ಮಾಡಲಾಯಿತು. ಲೋಕೋಪಯೋಗಿ ಇಲಾಖೆಯ ಮರು ಸಂಘಟನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಆ ಇಲಾಖೆಯ ಲೆಕ್ಕಪತ್ರ ಸಿಬ್ಬಂದಿಗಳನ್ನು ಸಹ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯೊಂದಿಗೆ 1959ರ ಸರ್ಕಾರಿ ಆದೇಶ ಸಂಖ್ಯೆ: ಎಫ್ ಡಿ 130 ಎಸ್ಎಡಿ 1959, ದಿ: 30.04.1959ರಂತೆ ವಲೀನಗೊಳಿಸಲಾಯಿತು. ಮುಂದುವರೆದು ಸರ್ಕಾರಿ ಆದೇಶ ಸಂಖ್ಯೆ: ಆಇ/224/ರಾಲೆಪ/2014 ದಿನಾಂಕ: 02.03.2015ರಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯೆಂದು  ಮರುಪದನಾಮಗೊಂಡಿರುತ್ತದೆ.

           1950ರಲ್ಲಿ ಅವಿರ್ಭವಿಸಿದ ರಾಜ್ಯಗಳ ಆರ್ಥಿಕ ವರ್ಗೀಕರಣದ ಫಲವಾಗಿ ಸ್ಥಾಪಿತವಾದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಕರ್ನಾಟಕ ಸರ್ಕಾರದ ಆರ್ಥಿಕ ಸಚಿವಾಲಯದ  ನೇರ ನಿಯಂತ್ರಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಒಂದು ಪ್ರಧಾನ ಇಲಾಖೆಯಾಗಿರುತ್ತದೆ. ಈ ಇಲಾಖೆಯ ಕೇಂದ್ರ ಕಛೇರಿಯು ಬೆಂಗಳೂರಿನ ಟಿ.ಟಿ.ಎಂ.ಸಿ ಕಟ್ಟಡ, ‘ಎ’ ಬ್ಲಾಕ್, ಬಿ.ಎಂ.ಟಿ.ಸಿ ಶಾಂತಿನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಿನಾಂಕ: 01.04.2016 ರಿಂದ 31.03.2017ರ ಅವಧಿಯಲ್ಲಿ ಒಟ್ಟು 2572 ಅಧಿಕಾರಿ/ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 536 ಅಧಿಕಾರಿ/ಸಿಬ್ಬಂದಿ ವರ್ಗದವರು ರಾಜ್ಯದ 29, ಜಿಲ್ಲಾ ಕೇಂದ್ರಗಳಲ್ಲಿರುವ ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲಗಳ ಹಾಗೂ 04 ಪ್ರಾಂತೀಯ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಅಧಿಕಾರಿ/ಸಿಬ್ಬಂದಿ ವರ್ಗವು ಇತರೆ ಸರ್ಕಾರಿ ಕಛೇರಿ/ನಿಗಮ/ಮಂಡಳಿಗಳಲ್ಲಿ ನಿಯೋಜನೆ ಮೇರೆಗೆ ಕೆಲಸ ನಿರ್ವಹಿಸುತ್ತಿದ್ದಾರೆ.

       ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ರಾಜ್ಯದಲ್ಲಿನ ಎಲ್ಲಾ ಗ್ರಾಮಪಂಚಾಯಿತಿಗಳು/ ನಗರ ಸ್ಥಳೀಯ ಸಂಸ್ಥೆಗಳು/ಶಾಸನಬದ್ಧ ಮಂಡಳಿಗಳು/ಪ್ರಾಧಿಕಾರಗಳು/ವಿಶ್ವವಿದ್ಯಾಲಯಗಳು/ಕಾಡಾ ಸಂಸ್ಥೆಗಳು ಹಾಗೂ ಇನ್ನಿತರ ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಲೆಕ್ಕಪರಿಶೋಧನಾ ಕಾರ್ಯಗಳಿಗೆ ಶಾಸನಬದ್ದ ಲೆಕ್ಕಪರಿಶೋಧಕರಾಗಿರುತ್ತಾರೆ. ಸರ್ಕಾರವು ನಿರ್ದೇಶಿಸಿದ ಯಾವುದೇ ಸಂಸ್ಥೆಗಳ ವಿಶೇಷ ಲೆಕ್ಕಪರಿಶೋಧನೆಯನ್ನು ಕೈಗೊಳ್ಳುತ್ತದೆ.  

ಇತ್ತೀಚಿನ ನವೀಕರಣ​ : 04-11-2020 12:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080